Rajkumar_Films

Monday 30 May 2011

ಮುಂಗಾರು ಮಳೆ(2006)-ಕುಣಿದು ಕುಣಿದು ಬಾರೆ

ಸಂಗೀತ : ಮನೋಮೂರ್ತಿ
ಸಾಹಿತ್ಯ : ಜಯಂತ್ ಕೈಕಿಣಿ
ಗಾಯಕರು : ಉದಿತ್ ನಾರಾಯಣ್, ಸುನಿಧಿ ಚೌಹನ್
ಸಂಗಡಿಗರು : ಜೂಬಾರೆ ಜೂಬಾರೆ ಜೂಬ ಜೂಬ
ಜೂಬಾರೆ ಜೂಬಾರೆ ಜೂಬ ಜೂಬ
ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಕುಣಿವಾ ನಿನ್ನ ಮೇಲೆ ಮಳೆಯ ಹನಿಯಾ ಮಾಲೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ
ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ
ಹೆಣ್ಣು : ಇರುಳಲಿ ನೀನೆಲ್ಲೋ ಮೈ ಮುರಿದರೆ
ನನಗಿಲ್ಲಿ ನವಿರಾದ ಹೂ ಕಂಪನ
ಗಂಡು : ಕಣ್ಣಲ್ಲಿ ನೀ ಕಣ್ಣಿಟ್ಟು ಬರ ಸೆಳೆದರೆ
ಮಾತಿಲ್ಲ ಕಥೆಯಿಲ್ಲ ಬರಿ ರೋಮಾಂಚನ
ಹೆಣ್ಣು : ನಿನ್ನಾ ಕಣ್ಣಾ ತುಂಬಾ ಇರಲಿ ನನ್ನಾ ಬಿಂಬ
ಹೂವಿಗೆ ಬಣ್ಣ ತಂದವನೇ ಪರಿಮಳದಲ್ಲಿ ಅರಳುವ ಬಾರೋ
ಓಲವೇ ವಿಸ್ಮಯ
ಸಂಗಡಿಗರು : ಡೂಬಾರೆ ಡೂಬಾರೆ ಡೂಬ ಡೂಬ
ಜೂಬಾರೆ ಜೂಬಾರೆ ಜೂಬ ಜೂಬ
ಗಂಡು : ಓಲವೇ ನೀ ನೊಲಿದ ಕ್ಷಣದಿಂದಲೆ
ಈ ಭೂಮಿ ಈ ಬಾನು ಹೊಸದಾಗಿದೆ
ಹೆಣ್ಣು : ಖುಷಿಯಿಂದ ಈ ಮನವೆಲ್ಲ ಹೂವಾಗಿರೆ
ಬೇರೇನು ಬೇಕಿಲ್ಲ ನೀನಲ್ಲದೆ
ಗಂಡು : ಕುಣಿದು ಕುಣಿದು ಬಾರೆ
ಉಲಿದು ಉಲಿದು ಬಾರೆ
ಜೀವಕೆ ಜೀವ ತಂದವಳೆ
ಜೀವಕ್ಕಿಂತ ಸನಿಹಾ ಬಾರೆ
ಓಲವೇ ವಿಸ್ಮಯ ಓಲವೇ ವಿಸ್ಮಯ
ನಿನ್ನಾ ಪ್ರೇಮ ರೂಪ ಕಂಡು
ನಾನು ತನ್ಮಯ
ಹೆಣ್ಣು : ಹುಚ್ಚು ಹುಡುಗ ನೀನು
ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತಂದವನೆ
ಬಾನಿಗೆ ಏರಿ ಹಾರುವ ಬಾರೋ
ಓಲವೇ ವಿಸ್ಮಯ

No comments:

Post a Comment