Rajkumar_Films

Thursday, 19 May 2011

nanagu ninagu - aramane

ಚಿತ್ರ: ಅರಮನೆ
ಹಾಡಿದವರು: ಕುನಾಲ್ ಗಾಂಜಾವಾಲ
ನಟರು: ಗಣೇಶ್, ರೋಮ

ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತು ಸಂಶಯ :-)

ನಲುಮೆ ಸ್ನೇಹದ ನವಿರಾದ ಗ್ರಂಥವೇ
ಪುಟವ ತೆರೆಯುವ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕಥೆಯಲಿ ನೀನನ್ನ ಕರೆದೆಯ?


ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲ ಭಾವದಿ ನನ್ನೊಂದು ಕೋರಿಕೆ
ಎಲ್ಲ ತಿಳಿದರು ಯಾಕಿನ್ನು ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ........

No comments:

Post a Comment