Rajkumar_Films

Thursday, 19 May 2011

'ಪುಟ್ಟಕ್ಕನ ಹೈವೇ' ಸೇರಿ ಕನ್ನಡಕ್ಕೆ 4 ರಾಷ್ಟ್ರೀಯ ಪ್ರಶಸ್ತಿ

ಪ್ರಸ್ತುತ ಸಂಭವಿಸುತ್ತಿರುವ ಪರಿಸರ ವಿಕೋಪಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಾರಣವಾಗುತ್ತಿರುವ ಆಧುನಿಕ ಅಭಿವೃದ್ದಿ ನೀತಿಯ ಬಗ್ಗೆ ಬೆಳಕು ಚೆಲ್ಲುವ ಪಿ. ಶೇಷಾದ್ರಿ ಅವರ 'ಬೆಟ್ಟದ ಜೀವ' ಚಿತ್ರಕ್ಕೆ ಅತ್ಯುತ್ತಮ ಪರಿಸರ ಜಾಗೃತಿ ಪ್ರಶಸ್ತಿ ಲಭಿಸಿದೆ.

ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮತ್ತು ಓದಿದ ವಿದ್ಯಾರ್ಥಿಗಳ, ಅರ್ಥಾತ್ ಕನ್ನಡ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಎದುರಾಗುವ ಕೀಳರಿಮೆಯನ್ನು ಮೆಟ್ಟಿನಿಲ್ಲುವ ಕಥಾಹಂದರವನ್ನು ಹೊಂದಿರುವ ರಾಮದಾಸ್ ನಾಯ್ಕ್ ಅವರ 'ಹೆಜ್ಜೆಗಳು' ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಕಠಿಣ ಗ್ರಾಮೀಣ ಜೀವನಶೈಲಿಯ ಕಥಾಹಂದರವನ್ನು ಹೊಂದಿರುವ ಬಿ.ಸುರೇಶ್ ಅವರ 'ಪುಟ್ಟಕ್ಕನ ಹೈವೆ' ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ. ಇನ್ನು ಅತ್ಯುತ್ತಮ ವಿಮರ್ಶಕ ಪ್ರಶಸ್ತಿ ಕನ್ನಡದ ಮನು ಚಕ್ರವರ್ತಿ ಅವರಿಗೆ ಸಂದಿದೆ. ಒಟ್ಟಾರೆಯಾಗಿ ಕನ್ನಡಕ್ಕೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಇವನ್ನೂ ಓದಿ

No comments:

Post a Comment